Stotram - Sacred Scripture in kannada

Bhagyada Lakshmi Baramma

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

Bhagyada Lakshmi Baramma

Stotram
Lakshmi
0 Verses
110%

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಶ್ಲೋಕ 1

ರಾಗಮ್: ಶ್ರೀ (ಮೇಲಕರ್ತ 22 ಖರಹರಪ್ರಿಯ ಜನ್ಯರಾಗ)

ಆರೋಹಣ: ಸ ರಿ2 ಮ1 ಪ ನಿ2 ಸ

ಅವರೋಹಣ: ಸ ನಿ2 ಪ ದ2 ನಿ2 ಪ ಮ1 ರಿ2 ಗ2 ರಿ2 ಸ

ತಾಲಮ್: ಆದಿ

ರೂಪಕರ್ತ: ಪುರನ್ಧರ ದಾಸ

ಭಾಷಾ: ಕನ್ನಡ

ಪಲ್ಲವಿ

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌ-ಭಾಗ್ಯದಾ ಲಕ್ಷ್ಮೀ ಬಾರಮ್ಮಾ ॥

ಚರಣಂ 1

ಹೆಜ್ಜೆಯೆ ಮೇಲೇ ಹೆಜ್ಜೆಯ ನಿಕ್ಕುತ

ಗೆಜ್ಜೆ ಕಾಲ್ಗಲಾ ಧ್ವನಿಯ ತೋರುತ (ಮಾಡುತ)

ಸಜ್ಜನ ಸಾಧೂ ಪೂಜೆಯ ವೇಲೆಗೆ

ಮಜ್ಜಿಗೆಯೊಲಗಿನ ಬೆಣ್ಣೆಯನ್ತೆ ॥

(ಭಾಗ್ಯದಾ)

ಚರಣಂ 2

ಕನಕಾವೃಷ್ಟಿಯ ಕರೆಯುತ ಬಾರೇ

ಮನಕಾಮನೆಯಾ ಸಿದ್ಧಿಯ ತೋರೆ ।

ದಿನಕರಕೋಟೀ ತೇಜದಿ ಹೊಲೆಯುವ

ಜನಕರಾಯನಾ ಕುಮಾರಿ ಬೇಗ ॥

(ಭಾಗ್ಯದಾ)

ಚರಣಂ 3

ಅತ್ತಿತ್ತಗಲದೆ ಭಕ್ತರ ಮನೆಯಲಿ

ನಿತ್ಯ ಮಹೋತ್ಸವ ನಿತ್ಯ ಸುಮಙ್ಗಲ ।

ಸತ್ಯವ ತೋರುವ ಸಾಧು ಸಜ್ಜನರ

ಚಿತ್ತದಿ ಹೊಲೆಯುವ ಪುತ್ಥಲಿ ಬೊಮ್ಬೆ ॥

(ಭಾಗ್ಯದಾ)

ಚರಣಂ 4

ಸಙ್ಖ್ಯೇ ಇಲ್ಲದ ಭಾಗ್ಯವ ಕೊಟ್ಟು

ಕಙ್ಕಣ ಕೈಯಾ ತಿರುವುತ ಬಾರೆ ।

ಕುಙ್ಕುಮಾಙ್ಕಿತೆ ಪಙ್ಕಜ ಲೋಚನೆ

ವೇಙ್ಕಟ ರಮಣನ ಬಿಙ್ಕದರಾಣೀ ॥

(ಭಾಗ್ಯದಾ)

ಚರಣಂ 5

ಸಕ್ಕೆರೆ ತುಪ್ಪದ ಕಾಲುವೆಹರಿಸಿ

ಶುಕ್ರವಾರದಾ ಪೂಜೆಯ ವೇಲೆಗೆ ।

ಅಕ್ಕೆರೆಯುಲ್ಲ ಅಲಗಿರಿ ರಙ್ಗನ

ಚೊಕ್ಕ ಪುರನ್ದರ ವಿಠ್ಠಲನ ರಾಣೀ ॥

(ಭಾಗ್ಯದಾ)